SHANKARANARAYANA DEVARU

ಓಂ ಹೄಂ ಶಿವನಾರಾಯಣಾಯ ನಮಃ

                  SRI SHANKARANARAYANA DEVASTHANADA HOSA ROOPA

 

      SHANKARANARAYANA MATTU  PARIVARA DEVARU                     

 

 

                    MAHALAKSHMI      SHANKARANARAYANA   MAHAGANAPATHI

                                           HISTORY

 

ಇತಿಹಾಸ

 

1960ರ ದಶಕದಲ್ಲಿ ಭಾರತ ಸರಕಾರವು ದೇಶದ 9ನೇ ಬೃಹತ್ ಬಂದರನ್ನು

ಪಣಂಬೂರಿನಲ್ಲಿ ನಿರ್ಮಿಸಿದಾಗ, ಪಣಂಬೂರು-ಬೈಕಂಪಾಡಿ ಹಾಗು ಸುತ್ತಮುತ್ತಲ

ಗ್ರಾಮಗಳ ನಿವಾಸಿಗಳನ್ನು ಕಾಟಿಪಳ್ಳ ಪುನರ್ವಸತಿ ಕೇಂದ್ರಕ್ಕೆ ಸ್ತಳಾಂತರಿಸುವ

ಸಂದರ್ಭದಲ್ಲಿ ಶ್ರೀ ವಿಶ್ವನಾಥ ದೇವಸ್ಥಾನ ನಿರ್ಮಣಕ್ಕೂ ಸ್ಥಳ ಕಾಯ್ದಿರಿಸಿ ಸರಕಾರವೇ

1975ರಲ್ಲಿ ನಿರ್ಮಾಣ ಕಾರ್ಯ ಪ್ರಾರಂಭಿಸಿ 1994ರಲ್ಲಿ ಮುಕ್ತಾಯಗೊಳಿಸಿತು. ಊರ

ಪರವೂರ ಭಕ್ತಾದಿಗಳಿಂದೊಡಗೂಡಿದ ಪ್ರತಿಷ್ಠಾ-ಬ್ರಹ್ಮಕಲಶೋತ್ಸವ ಸಮಿತಿ ರಚಿಸಿ ಶ್ರೀ

ಶಂಕರನಾರಾಯಣ ದೇವರ, ಶ್ರೀ ಗಣಪತಿ ಮತ್ತು ಶ್ರೀ ಲಕ್ಶ್ಮೀ ದೇವಿಯ ಪ್ರತಿಷ್ಠಾ-

ಬ್ರಹ್ಮಕಲಶಾಭಿಷೇಕ ಜರಗಿ ಗ್ರಾಮಸ್ಥರ ಬಹುಕಾಲದ ಕನಸು ನನಸಾಯಿತು.

ಆದರೆ ಸರಕಾರದಿಂದ ನಿರ್ಮಣಗೊಂಡ ಸುತ್ತು ಪೌಳಿಯ ಮಾಡುಗಳು ತೀರಾ

ಸೋರಲಾರಂಭಿಸಿ ತುಂಬ ಶಿತಿಲಗೊಂಡು ಪೂಜಾ ಕಾರ್ಯ ನಿರ್ವಹಿಸಲು ಅಸಾಧ್ಯವಾದ

ಪರಿಸ್ಥಿತಿಗೆ ತಲುಪಿತು. ಈ ಕ್ಲಿಷ್ಟಕರ ಪರಿಸ್ಥಿತಿಯನ್ನು ದೂರೀಕರಿಸುವರೇ ಶಾಸ್ತ್ರಜ್ಞರನ್ನು

ಆಹ್ವಾನಿಸಿ ಅವಲೋಕಿಸಿದಾಗ ಸುತ್ತು ಪೌಳಿ ಗರ್ಭಗುಡಿ ಮತ್ತು ತೀರ್ಥ ಮಂಟಪಗಳನ್ನು

ಬಿಡಿಸಿ ಪುನರ್ ನಿರ್ಮಿಸಿದಲ್ಲಿ ಶ್ರೀ ದೇವರ ಸಾನಿಧ್ಯಾಭಿವೃದ್ದಿಗೊಂಡು ಭಕ್ತೇಷ್ಟರ ಸಕಲ

ಇಷ್ಟಾರ್ಥಗಳು ಈಡೇರುವುದೆಂಬ ಅಂಶವನ್ನು ಮನಗಾಣಲಾಯ್ತು.

ಆ ಪ್ರಕಾರ ಕುಡುಪು ಶ್ರೀ ಕೃಷ್ಣರಾಜ ತಂತ್ರಿಗಳು, ಶ್ರೀ ಪಿ ವಾಸುದೇವ ಹೆಬ್ಬಾರ್ ಮತ್ತು ಶ್ರೀ ಪಿ ಸೀತಾರಾಮ್ ಐತಾಳ್ ರವರ ಮಾರ್ಗದರ್ಶನದಲ್ಲಿ ಮತ್ತು ಊರ ಸಮಸ್ತ ಭಕ್ತರ ಸಹಾಯದಿಂದ ಸುಮಾರು 3 ಕೋಟಿ ಅಂದಾಜು ವೆಚ್ಚದಲ್ಲಿ ಬೃಹತ್ ಶಿಲಾಮಯ ದೇವಾಲಯ ನಿರ್ಮಾಣಗೊಂಡು, ಶ್ರೀ ಶಂಕರನಾರಾಯಣ ಮತ್ತು ಪರಿವಾರ ದೇವರು ಪ್ರತಿಷ್ಠಾಪನೆಗೊಂಡು ಭಕ್ತರನ್ನು ತನ್ನತ ಸೆಳೆಯುತ್ತಿದ್ದಾರೆ.

 

                                     NO OF VISITORS